ಹೈಸ್ಕೂಲ್ ಶಿಕ್ಷಕರ ರಜೆಗೆ ಸರ್ಕಾರ ಕತ್ತರಿ ಪ್ರಯೋಗ ; ಡಾ.ಎಸ್.ಆರ್.ಹರೀಶ್ ಆಚಾರ್ಯ ಖಂಡನೆ
ಮಂಗಳೂರು: ಜೂನ್- ಜುಲೈಯಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ-2ಕ್ಕೆ ನೋಂದಣಿ ಮಾಡಲು ಇರುವ ವಿದ್ಯಾರ್ಥಿಗಳಿಗೆ ಮೇ 15ರಿಂದ ಜೂ.5ರ ವರೆಗೆ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್‍ಇಎಬಿ) ತರಾತುರಿಯಲ್ಲಿ ನಿರ್ದೇಶನ ನೀಡುವ ಮೂಲಕ


