Call Us +91-97429 68578, +91-6363 257 241 sr@harishacharya.in
Dr. S.R. Harish Acharya
  • Home
  • About Harish
  • News & Events
  • Gallery
  • Blog
  • Contact
  • Home
  • /
  • news-and-events
  • /
  • ಅನುದಾನಿತ ಶಾಲಾ ಶಿಕ್ಷಕರಿಗೂ ಹಳೇ ಪಿಂಚಣಿ ಸೌಲಭ್ಯ ವಿಸ್ತರಣೆಗೆ ಹರೀಶ್ ಆಚಾರ್ಯ ಆಗ್ರಹ

ಅನುದಾನಿತ ಶಾಲಾ ಶಿಕ್ಷಕರಿಗೂ ಹಳೇ ಪಿಂಚಣಿ ಸೌಲಭ್ಯ ವಿಸ್ತರಣೆಗೆ ಹರೀಶ್ ಆಚಾರ್ಯ ಆಗ್ರಹ

February 20, 2024 harish No Comments blog, news-and-events Dr. S R Harish Acharya

ಹಳೆಯ ಪಿಂಚಣಿ ಯೋಜನೆಯ (OPS) ಸೌಲಭ್ಯವನ್ನು ಏಪ್ರಿಲ್ 1, 2006 ರ ಪೂರ್ವದಲ್ಲಿ ಅಧಿಸೂಚಿತಗೊಂಡು ನಂತರದಲ್ಲಿ ನೇಮಕಾತಿಯನ್ನು ಪಡೆದ ಎಲ್ಲಾ ಸರಕಾರಿ ನೌಕರರಿಗೆ ಅನ್ವಯಗೊಳಿಸಲು ರಾಜ್ಯ ಸರಕಾರ ಆದೇಶ ಮಾಡಿದೆ. ಆದರೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೂ ಈ ಸೌಲಭ್ಯವನ್ನು  ವಿಸ್ತರಿಸಲು ಮೀನಮೇಷ ಎಣಿಸುತ್ತಿರುವ ರಾಜ್ಯ ಸರಕಾರ ಅನುದಾನಿತ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ದೂರಿದ್ದಾರೆ.

ಹಳೆಯ ಪಿಂಚಣಿ ವ್ಯವಸ್ಥೆಗೆ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ  ಸಾವಿರಾರು ಅರ್ಹ ಶಿಕ್ಷಕರು ಇದ್ದಾರೆ. ಏಪ್ರಿಲ್ 1, 2006 ರ ಪೂರ್ವದಿಂದಲೇ ಸೇವೆಯಲ್ಲಿದ್ದು ನಂತರದಲ್ಲಿ ಅನುದಾನಕ್ಕೊಳಪಟ್ಟ ಶಿಕ್ಷಕರು ಸಹಜವಾಗಿ ಹಳೆ ಪಿಂಚಣಿ ವ್ಯವಸ್ಥೆಗೆ ಅರ್ಹತೆಯನ್ನು ಹೊಂದಿದ್ದಾರೆ. ಹಾಗೆಯೇ ನಿಗದಿಪಡಿಸಿದ  ದಿನಾಂಕದ ಪೂರ್ವದಿಂದಲೇ ಹಲವಾರು ಖಾಸಗಿ ಅನುದಾನಿತ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಜಾರಿಯಲ್ಲಿದ್ದು ನಂತರ ನೇಮಕಾತಿಯನ್ನು ಹೊಂದಿದ ಅರ್ಹ ಶಿಕ್ಷಕರೂ ಇದ್ದಾರೆ. ಇಂತಹ ಶಿಕ್ಷಕರು ಹಳೆಯ ಪಿಂಚಣಿ ವ್ಯವಸ್ಥೆಗೆ ಸಹಜವಾಗಿ ಅರ್ಹತೆ ಉಳ್ಳವರಾಗಿದ್ದಾರೆ. ಇದು ಸರಕಾರಕ್ಕೆ ಹೆಚ್ಚು ಆರ್ಥಿಕ ವೆಚ್ಚದಾಯಕವೂ ಅಲ್ಲ. ಅದುದರಿಂದ ಅಂತವರಿಗೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನ್ವಯಿಸಿ ರಾಜ್ಯ ಸರಕಾರವು ಎಲ್ಲರಿಗೂ ಸಹಜ ನ್ಯಾಯವನ್ನು ಕಲ್ಪಿಸುವ ತತ್ವವನ್ನು ಪಾಲಿಸಬೇಕಾಗಿದೆ ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಪಿಂಚಣಿ ವ್ಯವಸ್ಥೆಯಲ್ಲಿ ಉದ್ಯೋಗಿಯ ಪಾಲು ಹೇಗೆಯೋ ಹಾಗೆಯೇ ಉದ್ಯೋಗದಾತನ ಪಾಲೂ ಇರುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ವೇತನದ ಅನುದಾನವನ್ನು ರಾಜ್ಯ ಸರಕಾರವು ನೀಡುತ್ತಿರುವುದರಿಂದ ಇಲ್ಲಿ ಸರಕಾರವೇ ಉದ್ಯೋಗದಾತನ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ.  ಎಪ್ರಿಲ್ 1, 2006 ರ ನೇಮಕಾತಿ ಹಾಗೂ ಅನುದಾನಕ್ಕೆ ಒಳಪಟ್ಯ ಶಿಕ್ಷಕರಿಗೆ ಉದ್ಯೋಗದಾತನ ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯು ಪಿಂಚಣಿಯ ಪಾಲನ್ನು ಒದಗಿಸಬೇಕೆಂದು ಸರಕಾರದ ನಿಯಮವಿದೆ. ಇದು ಸಮಂಜಸವೂ ಅಲ್ಲ. ಸಮರ್ಥನೀಯವೂ ಅಲ್ಲ. ಈ ವಿಷಯದಲ್ಲಿ ಅನಾವಶ್ಯಕವಾಗಿ ಸರಕಾರವು ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯೆಡೆಗೆ ಬೆರಳು ತೋರಿಸಿ ನುಣುಚಿ ಕೊಳ್ಳುವುದು ಸರಿಯಲ್ಲ. ಆದುದರಿಂದ ಪಿಂಚಣಿಗೆ ಬೇಕಾದ ಉದ್ಯೋಗದಾತನ ಪಾಲನ್ನೂ ಸರಕಾರವು ಒದಗಿಸಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೂ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಹರೀಶ್ ಆಚಾರ್ಯ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Share:
prev post next post

Leave a Comment Cancel reply

Your email address will not be published. Required fields are marked *

Recent Posts

  • ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆ ಜಾರಿ : ಇದು ನನ್ನ ಬದ್ಧತೆ | ಡಾ. ಎಸ್‌ ಆರ್‌ ಹರೀಶ್‌ ಆಚಾರ್ಯ
  • ಆತ್ಮೀಯ ಮಾಧ್ಯಮ ಮಿತ್ರರೇ,
  • ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇಲ್ಲಿ ಹುಡುಕಬಹುದು
  • ಶಿಕ್ಷಕರ ಧ್ವನಿ ಡಾ. ಎಸ್‌ ಆರ್‌ ಹರೀಶ್ ಆಚಾರ್ಯರ
  • ಹೈಸ್ಕೂಲ್‌ ಶಿಕ್ಷಕರ ರಜೆಗೆ ಸರ್ಕಾರ ಕತ್ತರಿ ಪ್ರಯೋಗ ; ಡಾ.ಎಸ್.ಆರ್.ಹರೀಶ್ ಆಚಾರ್ಯ ಖಂಡನೆ

Recent Comments

No comments to show.

Categories

  • blog (5)
  • news-and-events (16)
  • Uncategorized (1)

Recent Posts

  • ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆ ಜಾರಿ

    May 30, 2024
  • ಆತ್ಮೀಯ ಮಾಧ್ಯಮ ಮಿತ್ರರೇ,

    May 29, 2024
  • ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಮ್ಮ

    May 22, 2024

Archives

  • May 2024
  • April 2024
  • March 2024
  • February 2024
  • October 2023

Meta

  • Log in
  • Entries feed
  • Comments feed
  • WordPress.org

CONTACT DETAILS

Phone:+91-97429 68578, +91-6363 257 241
Email: sr@harishacharya.in
Address: Spandana 3rd Floor, Bramha Samaj Complex, Navabharath Circle, Mangalore – 575 003.

Facebook Twitter Instagram
Footer logo

Education is the most powerful weapon which you can use to change the world.

– Bharat Ratna Dr. APJ Abdul Kalam

Copyright © Dr. S. R. Harish Acharya. All Rights Reserved.