Call Us +91-97429 68578, +91-6363 257 241 sr@harishacharya.in
Dr. S.R. Harish Acharya
  • Home
  • About Harish
  • News & Events
  • Gallery
  • Blog
  • Contact
  • Home
  • /
  • news-and-events
  • /
  • ಮೌಲ್ಯಮಾಪನಾ ಸಂಭಾವನೆ, ಅತಿಥಿ ಉಪನ್ಯಾಸಕರ ವೇತನ ಪಾವತಿಗೆ ವಿವಿಯಲ್ಲಿ ದುಡ್ಡಿಲ್ಲ. ರಾಜ್ಯ ಸರಕಾರ ಮಧ್ಯ ಪ್ರವೇಶಕ್ಕೆ ಡಾ. ಎಸ್ ಆರ್ ಹರೀಶ್ ಆಚಾರ್ಯ ಆಗ್ರಹ

ಮೌಲ್ಯಮಾಪನಾ ಸಂಭಾವನೆ, ಅತಿಥಿ ಉಪನ್ಯಾಸಕರ ವೇತನ ಪಾವತಿಗೆ ವಿವಿಯಲ್ಲಿ ದುಡ್ಡಿಲ್ಲ. ರಾಜ್ಯ ಸರಕಾರ ಮಧ್ಯ ಪ್ರವೇಶಕ್ಕೆ ಡಾ. ಎಸ್ ಆರ್ ಹರೀಶ್ ಆಚಾರ್ಯ ಆಗ್ರಹ

April 11, 2024 harish No Comments news-and-events Dr. S R Harish Acharya, guest lectures issue, mangalore university, Teacher's Constituency
Join DigitalIndiaPortal.in WhatsApp Group - CSC

ಪರೀಕ್ಷಾ ಕಾರ್ಯವನ್ನು ನಿರ್ವಹಿಸಿರುವ ಉಪನ್ಯಾಸಕರಿಗೆ ಮೌಲ್ಯಮಾಪನ ಸಂಭಾವನೆಯನ್ನು ಹಾಗೂ ಅತಿಥಿ ಉಪನ್ಯಾಸಕರುಗಳಿಗೆ ಮಾಸಿಕ ವೇತನವನ್ನು ಪಾವತಿಸಲು ಮಂಗಳೂರು ವಿಶ್ವವಿದ್ಯಾನಿಲಯವು ಪರದಾಡುತ್ತಿದೆ. ಬಾಕಿ ಪಾವತಿಸಲು ಯಾವುದೇ ಸರಿಯಾದ ಯೋಜನೆಯನ್ನು ಹೊಂದದೇ ಬೇರೆ ಬೇರೆ ಸಬೂಬುಗಳನ್ನು ಹೇಳಿಕೊಂಡು ಕಾಲಹರಣ ಮಾಡುತ್ತಿರುವ ವಿವಿಯು ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ಅಸಮರ್ಥವಾಗಿದೆ. ಆದುದರಿಂದ ರಾಜ್ಯ ಸರಕಾರವು ತಕ್ಷಣವೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ ಆಗ್ರಹಿಸಿದ್ದಾರೆ.

Join DigitalIndiaPortal.in WhatsApp Group - CSC

ವಿಶ್ವವಿದ್ಯಾಲಯವು ಫೆಬ್ರವರಿ 2024 ರಂದು ಪರೀಕ್ಷಾ ಮೌಲ್ಯಮಾಪನ ಕಾರ್ಯ ನಿರ್ವಹಿಸಿದ ಉಪನ್ಯಾಸಕರ ಸಂಭಾವನೆಯನ್ನು ಪಾವತಿಸಿರುವುದಿಲ್ಲ. ಜನವರಿ 2023 ರಿಂದ ಪರೀಕ್ಷಾ ಕಾರ್ಯ ನಿರ್ವಹಿಸಿದ  ಮೇಲ್ವಿಚಾರಕರ ಹಾಗೂ ಜನವರಿ 2022 ರಿಂದ ಪರೀಕ್ಷಾ ಮೌಲ್ಯಮಾಪನಾ ಕೇಂದ್ರದ ಮುಖ್ಯಸ್ಥರು ಹಾಗೂ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳ ಸಂಭಾವನೆಯ ಪಾವತಿಯನ್ನೂ ಇದುವರೆಗೆ ಮಾಡಿರುವುದಿಲ್ಲ. ಮಂಗಳೂರು ವಿವಿ ಮತ್ತು ಅದರ ಬೇರೆ ಬೇರೆ ಘಟಕ  ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳಾಗಿ ಸೇವೆ ಮಾಡುತ್ತಿರುವ ಉಪನ್ಯಾಸಕರುಗಳಿಗೆ ಕಳೆದ ಮೂರು ತಿಂಗಳುಗಳಿಂದ ವೇತನ ಪಾವತಿಯಾಗಿರುವುದಿಲ್ಲ. ಇದರಿಂದ ಕಂಗಾಲಾಗಿರುವ ಅತಿಥಿ ಉಪನ್ಯಾಸಕರು ಪರದಾಡುವಂತಾಗಿದೆ. ಈ ಬಗ್ಗೆ ವೇತನ ಪಾವತಿಗೆ ಯಾವುದೇ ರೀತಿಯ ಕಾರ್ಯಯೋಜನೆಯನ್ನು ವಿವಿಯು ಹಾಕಿಕೊಂಡಿರುವುದಿಲ್ಲ. ವೇತನ ಪಾವತಿಗೆ ಹಣವನ್ನು ಹೊಂಡಿಸಿಕೊಳ್ಳಲು ಸೂಕ್ತ ಹಣಕಾಸಿನ ಮೂಲವನ್ನೂ ಹೊಂದಿರುವುದಿಲ್ಲ. ಅಲ್ಲದೇ ಮುಂದುವರಿದು ಯಾವುದೇ ವೇತನ ಹಾಗೂ ಸಂಭಾವನೆಯ ಪಾವತಿಗೆ ಯಾವುದೇ ಸೂಕ್ತ ಕ್ರಮವಿಡಲು ಸಂಪೂರ್ಣ ಅಸಮರ್ಥವಾಗಿದೆ. ಒಟ್ಟಾರೆಯಾಗಿ ವಿವಿಯ ಹಣಕಾಸು ನಿರ್ವಹಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂದೇಹ ಮೂಡಿದೆ ಎಂದು ಹರೀಶ್ ಆಚಾರ್ಯ ಅವರು ಆರೋಪಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಆರ್ಥಿಕ ಪರಿಸ್ಥಿತಿಯು ಈ ಪ್ರಮಾಣದಲ್ಲಿ ಹದಗೆಟ್ಟಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ತನಗೇನೂ ಸಂಬಂಧ ಇಲ್ಲವೆನ್ನುವಂತೆ ಕೈ ಕಟ್ಟಿ ಕುಳಿತುಕೊಳ್ಳುವುದು ಸಾಧುವಲ್ಲ. ಈ ಬಗ್ಗೆ ಸರಕಾರವು ತಕ್ಷಣವೇ ಮಧ್ಯ ಪ್ರವೇಶಿಸಬೇಕು. ವಿವಿಯ ಹಣಕಾಸು ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ಜವಾಬ್ದಾರಿಯನ್ನು ವಹಿಸಿಕೊಂಡು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡಬೇಕು. ಹಾಗೆಯೇ ವಿವಿಯ ಇಂತಹ ಆರ್ಥಿಕ ಅಧೋಗತಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

         

ಸ್ಥಳ: ಮಂಗಳೂರು
ದಿನಾಂಕ:11.4.2024

ಮಾಜಿ ಸಿಂಡಿಕೇಟ್ ಸದಸ್ಯರು
ಮಂಗಳೂರು ವಿಶ್ವವಿದ್ಯಾನಿಲಯ

Share:
prev post next post

Leave a Comment Cancel reply

Your email address will not be published. Required fields are marked *

Recent Posts

  • ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆ ಜಾರಿ : ಇದು ನನ್ನ ಬದ್ಧತೆ | ಡಾ. ಎಸ್‌ ಆರ್‌ ಹರೀಶ್‌ ಆಚಾರ್ಯ
  • ಆತ್ಮೀಯ ಮಾಧ್ಯಮ ಮಿತ್ರರೇ,
  • ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇಲ್ಲಿ ಹುಡುಕಬಹುದು
  • ಶಿಕ್ಷಕರ ಧ್ವನಿ ಡಾ. ಎಸ್‌ ಆರ್‌ ಹರೀಶ್ ಆಚಾರ್ಯರ
  • ಹೈಸ್ಕೂಲ್‌ ಶಿಕ್ಷಕರ ರಜೆಗೆ ಸರ್ಕಾರ ಕತ್ತರಿ ಪ್ರಯೋಗ ; ಡಾ.ಎಸ್.ಆರ್.ಹರೀಶ್ ಆಚಾರ್ಯ ಖಂಡನೆ

Recent Comments

No comments to show.

Categories

  • blog (5)
  • news-and-events (16)
  • Uncategorized (1)

Recent Posts

  • ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮದ ಕಾಯ್ದೆ ಜಾರಿ

    May 30, 2024
  • ಆತ್ಮೀಯ ಮಾಧ್ಯಮ ಮಿತ್ರರೇ,

    May 29, 2024
  • ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಮ್ಮ

    May 22, 2024

Archives

  • May 2024
  • April 2024
  • March 2024
  • February 2024
  • October 2023

Meta

  • Log in
  • Entries feed
  • Comments feed
  • WordPress.org

CONTACT DETAILS

Phone:+91-97429 68578, +91-6363 257 241
Email: sr@harishacharya.in
Address: Spandana 3rd Floor, Bramha Samaj Complex, Navabharath Circle, Mangalore – 575 003.

Facebook Twitter Instagram
Footer logo

Education is the most powerful weapon which you can use to change the world.

– Bharat Ratna Dr. APJ Abdul Kalam

Copyright © Dr. S. R. Harish Acharya. All Rights Reserved.